ಅನಾಥ ಹಸುಳೆ

ಅನಾಥ ಹಸುಳೆ ಮಾರ್ಗದರ್ಶಕ ನೀಮಾಯವಾಗಿರಲು ಗಮ್ಯವಿಲ್ಲದ ನಡೆಯು ದಾರಿ ಸವಿದೀತೆ ಹಡೆದವ್ವ ನೀ ಹಿಡಿದಪ್ಪಿಹರಸದೇ ಮುನಿದಿರಲು ಅಲೆಸುಳಿಗಳ ಆಳ ಸಾಗರದಿ ಈಸಲಾದೀತೆ ಭುವಿಕಾಯ್ವ ಮೇಘನು ಮಳೆಸುರಿಸದಿರಲು ಧರಣಿಯೊಡಲಿನ ಬೀಜ ಮೊಳಕೆಯೊಡದೀತೆ ನಿನ್ನ ನಂಬಿ ಜನಿಸಿದ ಬಳ್ಳಿ ನಾನಾಗಿರಲು ನಿನ್ನಾಸರೆಯಿಲ್ಲದೇ ನಿಲ್ಲಲಾದೀತೆ ತಾಯಮಡಿಲಂತ ಭುವಿಯೆ ಬಾಯ್ತೆರೆದು ನುಂಗಿರಲು ತೃಣಮಾತ್ರ ನಾನು ಬದುಕಲಾದೀತೆ ಕಾಯಬೇಕಾದವರಿಂದು ಕಟುಕರಾಗಿರಲು ಕಪಟವರಿಯದ ಕೂಸ ಕತ್ತು ಉಳಿದೀತೆ ಬೇಲಿಯೇ ಎದ್ದು ಹೊಲಮೇಯುತಿರಲು ಹಿಡಿದ ಹಗ್ಗವೆ ಇಂದು ಹಾವಾಗಿ ಕಡಿದಿರಲು ಆಸೆಇಲ್ಲದ ಬದುಕ ನಡೆಸಲಾದೀತೆ ಆತ್ಮವಿಲ್ಲದ ದೇಹ ಉಳಿಯಲಾದೀತೆ ಕೆ.ಬಾಲಾಜಿಚಿಂತಾಮಣಿ