ಅಳುಕದಿರು ಮನವೆ.
ಅಳುಕದಿರು ಅಳುಕಿ ಹಾಳಾಗದಿರು ಜಾಣನೆಂದು ಬೀಗುವ ಕೋಣ ನಾನಲ್ಲ ಜೀವನವು 2 ಗಳಿಗೆಯ ನಾಟಕವಲ್ಲ ಸಮಯವೊಬ್ಬನ ಸ್ವತ್ತೂ ಅಲ್ಲ ಆಡಿರುವ ಮಾತನು ಮರೆತಿಲ್ಲ ಓಡಿಯೇ ಗುರಿ ಮುಟ್ಟಬೇಕೆಂದಿಲ್ಲ ನಡೆದಾದರು ಮುಟ್ಟ ಬಹುದಲ್ಲ ಅವಸರಿಸಿ ಆಡಲು ಸ್ಪರ್ಧೆಯೂ ಅಲ್ಲ ಅವಸರದಿಂದ ಅವಸಾನ ತಪ್ಪಲ್ಲ ಬುದ್ಧಿವಂತರಾದವರಿಂದು ಬುದ್ಧಿ ಹೇಳಬೇಕಿಲ್ಲ ಬುದ್ಧಿ ಹೀನರಂತೆ ವರ್ತಿಸದಿದ್ದರೆ ಸಾಕಲ್ಲ ಬೆಳಕನೀಡುವ ದೀಪವಾಗದಿದ್ದರು ಚಿಂತೆಯಿಲ್ಲ ಕರುಳ ಬಳ್ಳಿಗೆ ಕೊಳ್ಳಿಯಿಡದಿದ್ದರೆ ಸಾಕಲ್ಲ ಸರಸದ ಚೌಕಾಬಾರವನಾಡಿ ಮುಗಿಸಿದೆ ವಿರಸದ ಚದುರಂಗದ ಸರದಿ ಬಂದಿದೆ ರಣಚಂಡಿಯಾಗದಿದ್ದರು ಚಿಂತೆಯಿಲ್ಲ ರಣಹೇಡಿಯಂತೆ ಬೆನ್ತೊರದಿದ್ದರೆ ಸಾಕಲ್ಲ.