ಮಾಯವಾದ ಮಿಂಚು ಹುಳುಗಳು



ನಮ್ಮ ಮನೆ ಹೊಲಗದ್ದೆಗಳ ಅಂಚಿನಲ್ಲಿ  ನಸುಗತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮುಸುತ್ತಾ ಹಾರುತ್ತಿದ್ದ ಮಿಂಚು ಹುಳುಗಳನ್ನು ಕಂಡು ಬಾಲ್ಯದಲ್ಲಿ ಅಚ್ಛರಿಗೊಂಡು ಮೂಗಿನ ಮೇಲೆ ಬೆರಳಿಟ್ಟು ,ಬಾಯ್ಬಿಟ್ಟು ನೋಡಿದ ಕ್ಷಣಗಳನ್ನು  ಮರೆಯಲಸದಳವಾಗಿದೆ. ಸಂಜೆಯ ನಸುಗತ್ತಲಲ್ಲಿ ಗಿಡಗಳ ಮೇಲೆ ಬೆರಳಾಡಿಸಿದರೆ ಸಾಕು ನೂರಾರು ಮಿಂಚು ಹುಳುಗಳ ದಂಡೆ ನಮ್ಮ ಮುಂದೆ ಪ್ರತ್ಯಕ್ಷವಾಗಿ ತಮ್ಮ ಸೊಭಗನ್ನು ತೋರಿಸುತ್ತಾ ವಯ್ಯಾರವಾಗಿ ಹಾರುತ್ತಾ ಹಳದಿ ಬಣ್ಣವನು ಚಿಮುಕಿಸುತ್ತಾ , ಸಣ್ಣ ಸಣ್ಣ ಸೊಳ್ಳೆ,ನೊಣ,ಕೀಟಗಳನ್ನು ಬೇಟೆಯಾಡುತ್ತಾ ನಮ್ಮೆಲ್ಲರ ಮನ ರೋಮಾಂಚನದಿಂದ ಸೆಳೆಯುತ್ತಿದ್ದ ಮದುರ ಕ್ಷಣಗಳು ಯಾರಿಗೆ ತಾನೆ ನೆನಪಿಲ್ಲ,ಮಿಂಚು ಹುಳುಗಳು ಅನಾದಿ ಕಾಲದಿಂದಲೂ ಮಾನವನ ಕುತೂಹಲವನ್ನು ಕೆಣಕುತ್ತಲೇ ಇವೆ. ಹಿಂದಿನ ಕಾಲದ  ಜನರು  ಮಿಂಚು ಹುಳುಗಳನ್ನು ತುಂಬಿಟ್ಟ ಲಾಂದ್ರಗಳನ್ನು ಬಳಸಿ ಕತ್ತಲಿನಿಂದ ಪಾರಾಗುತ್ತಿದ್ದರು, ಇಂದಿಗೂ ಸಹ ಗೀಜಗ ಹಕ್ಕಿಗಳು ತಮ್ಮ ಗೂಡುಗಳಲ್ಲಿ ಮಿಣುಕು ಹುಳುಗಳನ್ನು ಹಿಡಿದು ತಂದು ಜೇಡಿಮಣ್ಣಿನಿಂದ ಸಿಕ್ಕಿಸಿ ತನ್ನ ಮರಿಗಳಿಗೆ ಬೆಳಕು ನೀಡುತ್ತವೆ .ಅಷ್ಟೇ ಅಲ್ಲದೆ ಹಿಂದೆ ಬ್ರಿಜéಿಲ್ ದೇಶದ ಹೆಣ್ಣು ಮಕ್ಕಳು ತಮ್ಮ ಕೇಶಾಲಂಕಾರಕ್ಕಾಗಿ ಮಿಂಚು ಹುಳುಗಳನ್ನು ತಮ್ಮ ಮುಡಿಯಲ್ಲಿ ಸಿಕ್ಕಿಸಿಕೊಂಡು ತಮ್ಮ ಸೊಬಗನ್ನು ಹೆಚ್ಚಿಸಿಕೊಳ್ಳುತ್ತಿದ್ದರು ಎಂಬುದನ್ನು ಸಹ ಹಲವು ಮೂಲಗಳು ತಿಳಿಸುತ್ತವೆ,ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವಂತೆ ಮಿಂಚು ಹುಳುಗಳೂ ಸಹ ಬೆಳಕನ್ನು ಪಸರಿಸಲು ಕಾರಣವಿದೆ ಅವು ಬೆಳಕನ್ನು ಹರಿಸುವ ಮೂಲಕ ತಮ್ಮ ಸಂಗಾತಿಯನ್ನು ಆಕರ್ಷಣೆ ಮಾಡುತ್ತವೆ ಗಂಡು ಹುಳು ಬೆಳಕನ್ನು ಹರಿಸಿದ 2 ಸೆಕೆಂಡುಗಳ ನಂತರ ಹೆಣ್ಣು ಹುಳು ಬೆಳಕನ್ನು ಚಿಮ್ಮಿಸುತ್ತದೆ ಇದರಿಂದ ಗಂಡು ಆಕಷರ್ಿತಗೊಂಡು ಗಂಡು ಹೆಣ್ಣು ಕೂಡುತ್ತವೆ ಸಂವಹಿಸುತ್ತವೆ, ಟೀರೋಪ್ಟಿಕ್ಸ್ ಎಂಬ ಜಾತಿಯ ಮಿಂಚು ಹುಳುಗಳಲ್ಲಿ ಗಂಡು ನೀಲಿ ಬಣ್ಣದ ಬೆಳಕು ಚೆಲ್ಲಿದರೆ ಹೆಣ್ಣು ಹಳದಿ ಬಣ್ಣದ ಬೆಳಕನ್ನು ಚೆಲ್ಲುವುದರ ಮೂಲಕ ಪರಸ್ಪರ ಗುರಿತಿಸಿಕೊಳ್ಳುತ್ತವೆ ಒಂದು ನಿದರ್ಿಷ್ಟ ಅವದಿಯ ಅಂತರದಲ್ಲಿ ಬೆಳಕನ್ನು ಮಿನುಗಿಸಿ ತಮ್ಮ ಸಂಗಾತಿಯನ್ನು ಆಕಷರ್ಿಸಿ,ಸಂವಹಿಸುತ್ತವೆ ನಂತರ ಹೆಣ್ಣು ಹುಳು ಬೆಳಕನ್ನು ಹರಿಸುವ ಅಂಗಗಳಿಗೆ ಆಮ್ಲಜನಕವನ್ನು ಕಡಿತಗೊಳಿಸುವ ಮೂಲಕ ಬೆಳಕನ್ನು ನಿಯಂತ್ರಿಸಿ ತತ್ತಿ ಇಡುತ್ತವೆ,ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಮಿಂಚು ಹುಳುಗಳು ಆಘಾತಕಾರಿಯಾದ ಅಣುಕನ್ನು ಉಪಯೋಗಿಸುತ್ತವೆ ಹಾಗೆಂದರೆ ಒಂದು ಹುಳು ಮತ್ತೊಂದು ಹುಳುವಿನಂತೆ ನಟಿಸುವುದು ಪೋಟುರಿಸ್ ಎಂಬ ಜಾತಿಗೆ ಸೇರಿದ ಹೆಣ್ಣು ಮಿಂಚು ಹುಳುಗಳು ಮತ್ತೊಂದು ಜಾತಿಗೆ ಸೇರಿದ ಹೆಣ್ಣು ಹುಳುಗಳಂತೆ ಅಣುಕು ಮಾಡುತ್ತಾ ಗಂಡು ಹುಳುಗಳನ್ನು ಆಕಷರ್ಿಸಿ ಹತ್ತಿರ ಬಂದೊಡನೆ ಅದನ್ನು ಹಿಡಿದು ತಿನ್ನುತ್ತವೆ ಹೇಗೆ ಬೆಳಕನ್ನು ಹರಿಸಿ ತನ್ನ ಬೇಟೆಯನ್ನು ಹಿಡಿಯುತ್ತವೆ.ಮಿಂಚು ಹುಳುಗಳಂತೆಯೆ ಇನ್ನೂ ಹಲವಾರು ಹುಳುಗಳು ಜೈವಿಕ ದೀಪ್ತಿಯನ್ನು ಅಂದರೆ ಬೆಳಕನ್ನು ಪಸರಿಸಬಲ್ಲವು ಕೆಲವೊಮ್ಮೆ ಬೇಟೆಗಾಗಿ ಮಿಂಚು ಹುಳುಗಳಂತೆ ನಟಿಸಿ ಹತ್ತಿರ ಬಂದ ಮಿಂಚು ಹುಳುಗಳನ್ನು ಹಿಡಿಯುತ್ತವೆ ಆದುದರಿಂದ ಗಂಡು ಮಿಂಚು ಹುಳುಗಳು ಎತ್ತರದಲ್ಲಿ ಹಾರುತ್ತಾ ಬೆಳಕನ್ನು ಚೆಲ್ಲುತ್ತವೆ ಹಾಗು ಬೆಳಕಿನ ವ್ಯತ್ಯಾಸವನ್ನು ಗುರಿತಿಸಿ ಸರಿಯಾಗಿ ಹೆಣ್ಣು ಮಿಂಚುಹುಳುಗಳ ಬಳಿಗೆ ಸೇರುವಲ್ಲಿ ಸಫಲವಾಗಿ ಅಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಜೇನು ನೊಣಗಳು ರಾಣಿ ಜೇನನ್ನು ಹಿಂಬಾಲಿಸುವಂತೆ ಇವುಗಳಲ್ಲಿಯೂ ಒಂದು ಹುಳು ಮುಂದಾಳತ್ವವನ್ನು ವಹಿಸುತ್ತದೆ ಅದನ್ನು ಹಿಂಬಾಲಿಸಿ ಉಳಿದೆಲ್ಲಾ ಹುಳುಗಳು ಬೆಳಕನ್ನು ಚಿಮುಕಿಸುತ್ತಾ ಹಾರುತ್ತವೆ.ಆ ಬೆಳಕು ಎಷ್ಟು ವ್ಯವಸ್ಥಿತವಾಗಿರುತ್ತದೆಂದರೆ ಗಿಡದ ಮೇಲಿನಿಂದ ಕೆಳಕ್ಕೆ ಅಥವ ಕೆಳಗಿನಿಂದ ಮೇಲಕ್ಕೆ ದೀಪ್ತಿಯ ಚಮಕ ಹರಡುತ್ತಿರುತ್ತದೆ ಕೆಲವೊಮ್ಮೆ ಗಿಡದಿಂದ ಗಿಡಕ್ಕೆ ಅಲೆಗಳಂತೆ ಬೆಳಕು ಚಿಮ್ಮುತ್ತಿರುತ್ತವೆ ಜೊತೆಗೆ ಮಿಂಚು ಹುಳುಗಳು ಬೇರೆ ಬೇರೆ ರೀತಿಯಲ್ಲಿ ಬೆಳಕನ್ನು ಹೊರಚೆಲ್ಲುತ್ತಾ ಹಲವು ಸಂಜ್ಞೆಗಳನ್ನು ನೀಡುತ್ತವೆ ನೋಡಲು ಆ ದೃಶ್ಯವು ಮನಮೋಹಕವಾಗಿರುತ್ತದೆ,ಇಂತಹ ವಿಸ್ಮಯ ಮಿಂಚು ಹುಳುಗಳು ಹಿಂದೆ ನಮ್ಮ ಮನೆಯ ಅಕ್ಕ ಪಕ್ಕದಲ್ಲೆಲ್ಲಾ ಗಿಡಗಳಲ್ಲಿ ಆಡಿ ಕುಣಿಯುತ್ತಾ ನಮ್ಮೆಲ್ಲರನ್ನು ಮಂತ್ರ ಮುಗ್ದರಾಗಿಸುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಗಿಡಗಳೇ ಇಲ್ಲವಾಗಿರುವುದರಿಂದ ಈ ಮಿಂಚು ಹುಳುಗಳು ನಮಗೆ ಸಾಮಾನ್ಯವಾಗಿ ಕಾಣುತ್ತಿಲ್ಲ ಹಿಂದೆ ಬೇಕೆಂದಾಗ ಕಾಣಸಿಗುತ್ತಿದ್ದ ಮಿಂಚುಹುಳುಗಳು ಈಗ ಅಪರೂಪದ ಅತಿಥಿಗಳ ಪಟ್ಟಿಗೆ ಸೇರಿರುವುದು ನೋವಿನ ಸಂಗತಿಯಾಗಿದೆ.ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸೋಣ ಪ್ರಕೃತಿಯ ಸಮತೋಲನವ ರಕ್ಷಿಸೋಣ.
                                                                                                                         ಕೆ.ಬಾಲಾಜಿ,
ಶಿಕ್ಷಕರು,ಕವಿಗಳು,ಬರಹಗಾರರು.
ಚಿಂತಾಮಣಿ.

Comments

Popular posts from this blog

ಹೆಣ್ಣಿನ ಮಹತ್ವ

ಅದೊಂದು ದಿನ ಶನಿವಾರ