ಹೆಣ್ಣಿನ ಮಹತ್ವ
ಹೆಣ್ಣು ಕುಟುಂಬದ ಕಣ್ಣು ಎಂಬ ನಾಣ್ಣುಡಿಯಂತೆ,ಬಹಳಷ್ಟು ಜನ ಸಾಧಕರ ಅದ್ವಿತೀಯ ಸಾಧನೆಯ ಹಿಂದೆ ಒಂದಲ್ಲಾ ಒಂದು ವಿದವಾಗಿ ಅಂದರೆ ಮಾತೆಯಾಗಿ,ಅಧರ್ಾಂಗಿಣಿಯಾಗಿ,ಸಹೋದರಿಯಾಗಿ,ಗೆಳತಿಯಾಗಿ ಹೆಣ್ಣಿನ ಪ್ರೇರಣೆ ಪ್ರಮುಖವಾಗಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದಾಗಿದೆ, ಮಹಾತ್ಮ ಗಾಂದೀಜಿ,ಛತ್ರಪತಿ ಶಿವಾಜಿ,ಸ್ವಾಮಿ ವಿವೇಕಾನಂದರು ಮುಂತಾದವರು ಅವರ ತಾಯಂದಿರಿಂದ ಪ್ರೇರಿತರಾದವರು.ಈಶ್ವರ ಚಂದ್ರ ವಿದ್ಯಾಸಾಗರರೂ ಸಹ ಇದಕ್ಕೆ ಹೊರತಾಗಿಲ್ಲ,ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದ ಇವರು ಬಹಳಷ್ಟು ಕಷ್ಟಗಳಲ್ಲಿ ಬೆಳೆದು ಬಂದಂತವರಾಗಿದ್ದು ಇವರು ಚಿಕ್ಕಂದಿನಲ್ಲಿ ಬೀದಿ ದೀಪದ ಅಡಿಯಲ್ಲಿ ಕೂತು ಕಲಿತಂತವರು,ಬಡತನದ ಬೇಗೆಯಲ್ಲಿ ಬೆಂದಂತವರು ಇವರು ಚಿಕ್ಕಂದಿನಿಂದಲೂ ಬಹಳಷ್ಟು ಶ್ರಮಜೀವಿಗಳು,ಅವರ ಕಠಿಣ ಪರಿಶ್ರಮದಿಂದಾಗಿ ಮುಂದೆ ಒಳ್ಳೆಯ ಕೆಲಸದಲ್ಲಿ ಸೇರಿಕೊಳ್ಳುತ್ತಾರೆ,ಯಾವುದಕ್ಕು ಕೊರತೆ ಇಲ್ಲದಂತೆ ಜೀವಿಸುವಾಗ ಒಮ್ಮೆ ಅವರ ತಾಯಿಯವರಾದ ಭಾಗವತಿದೇವಿಯವರ ಬಳಿಬಂದು ಅಮ್ಮಾ ನಾನು ನನ್ನ ಸಂಪಾದನೆಯ ಸ್ವಲ್ಪಬಾಗವನ್ನು ನಿಮಗಾಗಿ ಮೀಸಲಿರಿಸಿದ್ದೇನೆ ನಿಮಗೇನು ಬೇಕು ಕೇಳಿ ಎಂದಾಗ ಅಯ್ಯೊ ನನಗೇನು ಬೇಡ ಮಗು ಎನ್ನುತ್ತಾರೆ ಇಲ್ಲಮ್ಮ ನಿಮಗಾಗಿ ನಾನು ಏನಾದರು ಕೊಡಲೇಬೇಕು ಎಂದು ಪಟ್ಟುಹಿಡಿದಾಗ ಹಾಗಾದರೆ ಮಗು ನಮ್ಮ ಗ್ರಾಮದ ಜನತೆ ನೀರಿಗಾಗಿ ಬಹಳಷ್ಟು ಪರಿತಪಿಸುತ್ತಿದ್ದಾರೆ ನೀರಿಗಾಗಿ ತುಂಬಾ ದೂರ ಹೋಗಬೇಕಾಗಿದೆ ಅವರಿಗೆ ಒಂದು ಬಾವಿ ತೋಡಿಸು ಎನ್ನುತ್ತಾರೆ ಅವರ ತಾಯಿಯ ಇಚ್ಚೆಯಂತೆ ಬಾವಿಯನ್ನು ತೋಡಿಸುತ್ತಾರೆ,ಅದಾದ ಸುಮಾರು ವರ್ಷಗಳ ಬಳಿಕ ಮತ್ತೊಮ್ಮೆ ಅಮ್ಮಾ ನೀವು ನನ್ನಿಂದ ಯಾವುದೇ ಸಹಾಯ ಪಡೆಯುತ್ತಿಲ್ಲ ನಿಮಗಾಗಿ ಏನಾದರು ಮಾಡಬೇಕೆಂಬ ಬಯಕೆ ನನ್ನದು ನಿನಗೇನು ಬೇಕೊ ಕೇಳಮ್ಮ ಎಂದಾಗ ಏನಿಲ್ಲ ಮಗು ನನ್ನದು ಸಣ್ಣದೊಂದು ಬಯಕೆ ಇದೆ ನಮ್ಮ ಗ್ರಾಮದ ಜನತೆಗೆ ಸರಿಯಾದ ಔಷದಿ ಸಿಗದೆ ಬಳಲುತ್ತಿದ್ದಾರೆ ಬಹಳಷ್ಟು ದೂರದ ವರೆಗೆ ಯಾವುದೆ ಆಸ್ಪತ್ರೆ ಇಲ್ಲ ನಿನ್ನ ಕೈಲಾಗುವುದಾದರೆ ನಮ್ಮ ಜನತೆಗೆ ಒಂದು ಆಸ್ಪತ್ರೆಯನ್ನು ಕಟ್ಟಿಸುಕೊಡು ಎನ್ನುತ್ತಾರೆ ಅವರ ಮಾತಿನಂತೆಯೆ ಒಂದು ಆಸ್ಪತ್ರೆಯನ್ನೂ ಸಹ ಕಟ್ಟಿಸುತ್ತಾರೆ,ಹೀಗೆ ತಮ್ಮ ತಾಯಿಯ ಪ್ರೇರಣೆಯಿಂದಾಗಿ ತಮಗೇ ಅರಿವಿಲ್ಲದಂತೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.ಒಬ್ಬ ಶ್ರೇಷ್ಠ ಶಿಕ್ಷಣತಜ್ಙ,ತತ್ವಜ್ಙಾನಿ,ವ್ಯಾಪಾರಿ,ಬರಹಗಾರ,ಸಮಾಜ ಸುದಾರಕ, ಸ್ವಾತಂತ್ರ್ಯಹೋರಾಟಗಾರರು ಮತ್ತು ದಾನಿಯು ಆಗಿದ್ದಂತಹ ಈಶ್ವರ ಚಂದ್ರ ವಿದ್ಯಾಸಾಗರರು ಬಹಳಷ್ಟು ಪ್ರಖ್ಯಾತರಾಗುತ್ತಾರೆ ಅವರು ಸರಳಜೀವಿಗಳು ಒಮ್ಮೆ ಅವರ ಗ್ರಾಮದಲ್ಲಿ ಅವರಿಗಾಗಿ ದೊಡ್ಡ ಸಭೆಯನ್ನು ಏರ್ಪಡಿಸಿ ಸನ್ಮಾನಿಸಬೇಕೆಂದು ತೀಮರ್ಾನಿಸುತ್ತಾರೆ ಆ ಸಬೆಗೆ ವಿದ್ಯಾಸಾಗರರು ರೈಲಿನಲ್ಲಿ ಬಂದಿಳಿದಾಗ ಅವರನ್ನು ನೋಡಿರದ ಒಬ್ಬ ಐ,ಎ,ಎಸ್ ಅದಿಕಾರಿ ಎಲ್ಲಿಗಯ್ಯ ಹೊರಟಿರುವೆ ಎಂದು ಪ್ರಶ್ನಿಸುತ್ತಾರೆ ಸಮಾರಂಭಕ್ಕೆ ಎಂದೊಡನೆ ಹಾಗಾದರೆ ನನ್ನ ಲಗೇಜನ್ನು ತಗೊ ನಾನೂ ಅಲ್ಲಿಗೆ ಹೊರಟಿರುವೆ ಎಂದೊಡನೆ ಮರುಮಾತಾಡದೆ ಅವರ ಬ್ಯಾಗನ್ನು ಹಿಡಿದು ಬರುತ್ತಾರೆ ಸಭೆಯ ಬಳಿ ಬಂದೊಡನೆ ಎಲ್ಲರೂ ಓಡಿ ಬಂದು ವಿದ್ಯಾಸಾಗರರಿಗೆ ಜೈಕಾರ ಹಾಕುತ್ತಾ ಪುಷ್ಪಮಾಲೆಯನ್ನು ಹಾಕಿದೊಡನೆ ಅದಿಕಾರಿಗೆ ಅವರೆ ವಿದ್ಯಾಸಾಗರರು ಎಂದು ತಿಳಿದು ತನ್ನ ತಪ್ಪಿಗೆ ಕ್ಷಮೆಯಾಚಿಸುತ್ತಾರೆ ಆಗಲೂ ವಿದ್ಯಾಸಾಗರರು ಶಾಂತವಾಗಿ ಕ್ಷಮೆಯ ಅಗತ್ಯವಿಲ್ಲ ಒಬ್ಬ ಭಾರತೀಯನ ಸೇವೆ ಮಾಡುವ ಅವಕಾಶಕ್ಕಾಗಿ ನಾನು ಧನ್ಯ ಎನ್ನುವಷ್ಟರ ಮಟ್ಟಿಗೆ ಅವರ ವ್ಯಕ್ತಿತ್ವ ಬೆಳೆಯಲು ಕಾರಣ ಅವರ ಮಾತೃಮೂತರ್ಿಭಾಗವತಿ ದೇವಿಯವರು ಹೀಗೆ ಚಿಕ್ಕಂದಿನಲ್ಲಿ ಮಾತೆಯರು,ಸಹೋದರಿಯರು ತೋರುವ ಪ್ರೀತಿ,ಅನುರಾಗ,ಆಪ್ಯಾಯತೆಯನ್ನು ಬೆಳೆದು ದೊಡ್ಡವರಾದೊಡನೆ ಮರೆತು ಮೃಗೀಯಗುಣಗಳನ್ನು ಬೆಳಸಿಕೊಂಡು ಸ್ತ್ರೀಯರ ಮೇಲೆ ದೌರ್ಜನ್ಯ,ದಬ್ಬಾಳಿಕೆಗಳನ್ನು ನಿಲ್ಲಿಸಿ ಎಲ್ಲಾ ಸ್ತ್ರೀಯರಲ್ಲೂ ತಾಯಿಯನ್ನು,ಸಹೋದರಿ ಭಾವವನ್ನು ತೋರುವಂತಹ ಹಾಗು ಸ್ತ್ರೀಯರಿಗೆ ಸಮಾನ ಸ್ತಾನಮಾನಗಳನ್ನು ನೀಡಿದ್ದಂತಹ ವೇದಗಳ ಕಾಲದ ಸಂಸ್ಕೃತಿಯನ್ನು ಗೌರವಿಸಿ ವೇದಗಳಿಗೆ ಹಿಂತಿರುಗೋಣ.
ಕೆ.ಬಾಲಾಜಿ,ಶಿಕ್ಷಕರು,ಕವಿಗಳು,ಬರಹಗಾರರು.ಚಿಂತಾಮಣಿ.
Comments
Post a Comment