Posts

Showing posts from January, 2018

ಹಿಡಿತವಿಲ್ಲದ ಪಟ

Image
ಹಿಡಿತವಿಲ್ಲದ  ಪಟ ಅಮ್ಮ ಅಕ್ಕಂದಿರ ಆಸರದಿ ಆಗಸವ ಕಂಡೆ ಸ್ವಚ್ಛಂದವಾಗಿ  ವಿಹರಿಸುವ ಪುಟ್ಟ ಪಟದಂತೆ ದಿನಕೊಂದು ಬಣ್ಣದಿಂದೆಲ್ಲರ ಮನಸೋರೆಗೊಂಡೆ ಪ್ರೀತಿ ವಾತ್ಸಲ್ಯಗಳ ಕೊಂಡಿ ಈ ದಾರವೆಂದರಿತೆ ಪಟ  ಅಂದ ಮೇಲೊಂದು ಬಾಲಬೇಕೆಂದೆ ಚೆಲುವೆಯೋರ್ವಳನು ತಂದು ಸಿಕ್ಕಿಸಿದರಂದೆ ಬಾಲದೊಂದಿಗೆ ಅಂದು ಬಾನಲ್ಲಿ ಮೆರೆದೆ ಬೀಳಲು ಬಿಡದಿರುವ ಬಂದವನು ಕಂಡೆ ಅಪ್ಪನಾ ಸಾವನ್ನು ಕಣ್ಣಾರಕಂಡೆ ಕ್ಷಣದಲ್ಲಿ ಕೆಳಗೆ ಕುಸಿದು ಬಿದ್ದೆ ದಾರವಿದ್ದರು ಕೆಳಗೆ ನಾ ಹೇಗೆ ಬಿದ್ದೆ ದಾರಕಿಂತಲು ಗಾಳಿ ಪ್ರಮುಖವೆಂದರಿತೆ ಗುರಿ ಮುಟ್ಟಬೇಕೆಂದು ಛಲದಿಂದ ಜಿಗಿದೆ ದಾರಹಿಡಿದಿರುವ ಕೈಗಳಲಿ ಸಡಿಲತೆಯ ಕಂಡೆ ಅಕ್ಕಂದಿರೊರಟರು ಬಾವಂದಿರಿಂದೆ ಹಿಡಿತವಿಲ್ಲದೆ ಪಟಕೆ ದೇವರೆದಿಕ್ಕೆಂದೆ. ಕೆ. ಬಾಲಾಜಿ ಚಿಂತಾಮಣಿ.

ಗೋಮಾತೆಗೆ ವಿಮುಕ್ತಿ

Image
           ಗೋಮಾತೆಗೆ ವಿಮುಕ್ತಿ ?           ಕಾಡಿನಲ್ಲಿ  ಹುಲ್ಲು ಮೆಲ್ಲುತ್ತಿದ್ದ ಹಸುವಿನ ಮೇಲೆ ಹಟಾತ್ತನೆ ಹುಲಿಯೊಂದು ದಾಳಿ ಮಾಡಿತು, ಹಸು ಓಡಲೆತ್ನಿಸಲಿಲ್ಲ,ಭಯಪಡಲಿಲ್ಲ ಹುಲಿಗೆ ಆಶ್ಚರ್ಯವಾಯಿತು.ಆಗ ಹಸು ಹೇಳಿತು ಬಾ ಗೆಳೆಯ ಬಂದು ನನ್ನ ತಿಂದು ನಿನ್ನ ಹಸಿವ ನೀಗಿಸಿಕೊ,ನನ್ನ ರಕ್ತ,ಎಲುಬು,ಮಾಂಸ,ಚರ್ಮ,ಕೊನೆಗೆ ನನ್ನ ಮಲ ಮೂತ್ರ,ಸುಟ್ಟ ಬೂದಿ ಸಮಸ್ತವನ್ನು ಮನುಷ್ಯನಿಗಾಗಿ ಧಾರೆಯೆರದರೂ ಅವನ ಹಸಿವು ನೀಗಲಿಲ್ಲ ಕೊನೆಗೆ ಇಂದು ನನ್ನ ಹೆಸರಿಂದಲೂ  ಬಂಡವಾಳ ಮಾಡಿಕೊಳ್ಳುತ್ತಿರುವ ನೀಚನಿಗೆ ಆಸರೆಯಾಗುವಬದಲು ನಿನ್ನ ಹೊಟ್ಟೆ ತಣಿಸಿ ಸಂತಸದಿಂದ ಮಡಿದುಮುಕ್ತಿ ಪಡೆಯುವೆ ಬಾ ಬಾ ನನಗೆ ವಿಮುಕ್ತಿ ನೀಡು ಎಂದು ಮುನ್ನುಗ್ಗಿತು.              ...........ಕೆ.ಬಾಲಾಜಿ ಚಿಂತಾಮಣಿ............

ನ್ಯಾನೋ ಕಥೆ

Image
                                                                                                                                                      ಪರಿಚಯ ಒಬ್ಬ ಗಣ್ಯವ್ಯಕ್ತಿ ತನ್ನ ಮನೆಗೆ ಪ್ರತಿನಿತ್ಯ ಸನ್ಮಾನಿಸಲು,ಅಭಿನಂದಿಸಲು ಬರುವ ಆಪ್ತರೆಲ್ಲರಿಗೂ ತನ್ನ ಮಡದಿ ಮಕ್ಕಳನ್ನು ತೋರಿಸಿ ಗರ್ವದಿಂದ ಪರಿಚಯಿಸುವಾಗ ಮೂಲೆಯೊಂದರ ರೂಮಿನ ಕದದ ಹಿಂದೆ ಕಣ್ತೆರೆದು ಮಲಗಿದ್ದ ಮುದಕಿಗೆ ಹಿಂದೆ ತಾನೂ ಇದೇರೀತಿ ಮಗನ ತೋರಿಸಿ ಅವನ ಗುಣವಿಶೇಷಣಗಳ ವರ್ಣಿಸಿ ಸಂತಸ ಪಡುತ್ತಿದ್ದುದು ನೆನಸಿಕೊಳ್ಳುತ್ತಾ ಒದ್ದೆಯಾದ ಕಣ್ಣನೊರಸಿಕೊಂಡಳು.

ಅಳುಕದಿರು ಮನವೆ.

ಅಳುಕದಿರು ಅಳುಕಿ ಹಾಳಾಗದಿರು ಜಾಣನೆಂದು ಬೀಗುವ ಕೋಣ ನಾನಲ್ಲ ಜೀವನವು 2 ಗಳಿಗೆಯ ನಾಟಕವಲ್ಲ ಸಮಯವೊಬ್ಬನ ಸ್ವತ್ತೂ ಅಲ್ಲ ಆಡಿರುವ ಮಾತನು ಮರೆತಿಲ್ಲ ಓಡಿಯೇ ಗುರಿ ಮುಟ್ಟಬೇಕೆಂದಿಲ್ಲ ನಡೆದಾದರು ಮುಟ್ಟ ಬಹುದಲ್ಲ ಅವಸರಿಸಿ ಆಡಲು ಸ್ಪರ್ಧೆಯೂ ಅಲ್ಲ ಅವಸರದಿಂದ ಅವಸಾನ ತಪ್ಪಲ್ಲ ಬುದ್ಧಿವಂತರಾದವರಿಂದು ಬುದ್ಧಿ ಹೇಳಬೇಕಿಲ್ಲ ಬುದ್ಧಿ ಹೀನರಂತೆ ವರ್ತಿಸದಿದ್ದರೆ ಸಾಕಲ್ಲ ಬೆಳಕನೀಡುವ ದೀಪವಾಗದಿದ್ದರು ಚಿಂತೆಯಿಲ್ಲ ಕರುಳ ಬಳ್ಳಿಗೆ ಕೊಳ್ಳಿಯಿಡದಿದ್ದರೆ ಸಾಕಲ್ಲ ಸರಸದ ಚೌಕಾಬಾರವನಾಡಿ ಮುಗಿಸಿದೆ ವಿರಸದ ಚದುರಂಗದ ಸರದಿ ಬಂದಿದೆ ರಣಚಂಡಿಯಾಗದಿದ್ದರು ಚಿಂತೆಯಿಲ್ಲ ರಣಹೇಡಿಯಂತೆ ಬೆನ್ತೊರದಿದ್ದರೆ ಸಾಕಲ್ಲ.