
ಈದಿನ ಬೆಳಿಗ್ಗೆ ಯಥಾಪ್ರಕಾರವಾಗಿ ಶಾಲೆಗೆ ಹೋದೊಡನೆಯೆ ಮಕ್ಕಳೆಲ್ಲ ರಂಗುರಂಗಿನ ಉಡುಗೆತೊಟ್ಟು ಹೆಣ್ಣುಮಕ್ಕಳೆಲ್ಲಾ ಕೈತುಂಬ ಬಳೆ ಧರಿಸಿ ಬಹಳಷ್ಟು ಸೊಗಸಾಗಿ ಶಾಲೆಗೆ ಬಂದಿದ್ದು ಕಂಡು ಅಚ್ಛರಿಯಾಯಿತು ಒಬ್ಬ ವಿದ್ಯಾರ್ಥಿ ಹತ್ತಿರ ಬಂದು 10 ರ ನೋಟುಗಳು ಒಂದಷ್ಟು ಚಿಲ್ಲರೆ ಟೇಬಲ್ ಮೇಲೆ ಸುರಿದು ಸರ್ 120 ರೂ ಇದೆ ಈದಿನ ಸರಸ್ವತಿ ಪೂಜೆ ಮಾಡಬೇಕು ಸರ್ ಅಂದ ನನಗೂ ಬಹಳಷ್ಟು ಸಂತೋಷವಾಗಿ ಒಪ್ಪಿಕೊಂಡು ತರಾತುರಿಯಲ್ಲಿ ಸಕಲ ಸಿದ್ಧತೆಗಳು ಮಾಡಿ ವಿಜೃಂಭಣೆಯಿಂದ ಪೂಜೆ ಮಾಡಿ ಹಬ್ಬದ ಅಡುಗೆ ಮಾಡಿಸಿ ಸಂಭ್ರಮಿಸುವಾಗ ನನಗೆ ಬಾಲ್ಯದ ದಿನಗಳು ನೆನಪಾದವು ಹೌದು ನಾನು ಹೀಗೆ ಬಾಲ್ಯದಲ್ಲಿ ಓದಿನಲ್ಲಿ ಹಿಂದಾದರೂ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಮುಂದಿರುತ್ತಿದ್ದೆ ಗೆಳೆಯರೆಲ್ಲರೂ ಒಟ್ಟಾಗಿ ಸೇರಿ ಬೆಳಿಗ್ಗೆ 6 ಕ್ಕೆ ಎದ್ದು ಸ್ನಾನ ಮಾಡಿ ಪಕ್ಕದ ತೋಟಗಳಲ್ಲಿ ವಿಕಸಿಸಿದ ಪುಷ್ಪಗಳನ್ನೆಲ್ಲಾ ಬಿಡಿಸಿಕೊಂಡು ಹೋಗುತ್ತಿದ್ದೆ ಮಾವಿನ ಎಲೆಗಳಿಂದ ತೋರಣ ಕಟ್ಟಿ ಶಾಲೆಯೆಲ್ಲಾ ಸ್ವಚ್ಛಗೊಳಿಸಿ ಬಾಳೆದಿಂಡು,ಹೂವಿನ ಹಾರಗಳಿಂದ ಸಿಂಗರಿಸಿ ಮುಂಬಾಗವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿಸಿ ತಾಯಿ ಶಾರದೆಯ ಚಿತ್ರಪಟವನ್ನು ಹೂವು ಕಾಯಿ ಹಾರ ಪಲ್ಯ ಗಂದ ದೂಪಾದಿಗಳಾಗಿ ಸಿಂಗರಿಸಿ ಪುಸ್ತಕಗಳನ್ನಿಟ್ಪು ಅದ್ದೂರಿಯಾಗಿ ಪೂಜೆ ಮಾಡಿ ತಂದಿದ್ದ ಸಿಹಿಯನ್ನು ಶಿಕ್ಷಕ ವಿದ್ಯಾರ್ಥಿಗಳಿಗೆಲ್ಲ ಹಂಚಿ ಆ ಒಂದು ದಿನ ಪರೀಕ್ಷೆಯ ಭಯವಿಲ್ಲ...