ಕಾಗೆ ಕಾಗೆಯ ಕಂಡೊಡನೆ ಕಲ್ಲೆಸಿಯುವಿರೇಕೆ? ಕಾಗೆಯೆಂಬ ಕೀಳರಿಮೆಯು ನಿಮಗೇಕೆ? ಮನೆಯೊಳಗೆ ಬಂದರೆ ಮನೆಬಿಡುವಿರೇಕೆ? ಕಾಗೆಯನ್ನು ಕುರೂಪಿ ಎನ್ನುವಿರೇಕೆ? ನೆಂಟರು ಬರುವ ಸುದ್ದಿಯನು ತಿಳಿಸುವುದು ಕಾಗೆಯಲ್ಲವೇ ಮನೆಯಂಗಳದ ಹುಳುಹುಪ್ಪಟೆಗಳ ಹಿಡಿದು ತಿನ್ನುವುದು ಕಾಗೆಯಲ್ಲವೇ ರೈತನಿಗೆ ಮಿತ್ರನಾದವ ಈ ಕಾಗೆಯಲ್ಲವೇ ಕೊನೆಗೆ ನಿನ್ನ ಪಿಂಡವ ತಿನ್ನುವುದು ಕಾಗೆಯಲ್ಲವೇ ಅನ್ನವ ಕಂಡೊಡನೆ ಬಳಗವೆಲ್ಲವನು ಕರೆದು ಹಂಚಿ ತಿನ್ನುವ ನೀತಿ ಕಾಗೆಯದು ಒಂದು ಕಾಗೆಗೆ ಕಷ್ಟಬಂದರೆ ಎಲ್ಲ ಕಾಗೆಗಳು ಒಂದೆಡೆ ಸೇರುವ ಜಾತಿ ಕಾಗೆಯದು. ಕೆ,ಬಾಲಾಜಿ ಕವಿಗಳು,ಶಿಕ್ಷಕರು ಚಿಂತಾಮಣಿ.