Posts

ಅನಾಥ ಹಸುಳೆ

Image
ಅನಾಥ ಹಸುಳೆ ಮಾರ್ಗದರ್ಶಕ ನೀಮಾಯವಾಗಿರಲು ಗಮ್ಯವಿಲ್ಲದ ನಡೆಯು ದಾರಿ ಸವಿದೀತೆ ಹಡೆದವ್ವ ನೀ ಹಿಡಿದಪ್ಪಿಹರಸದೇ ಮುನಿದಿರಲು ಅಲೆಸುಳಿಗಳ ಆಳ ಸಾಗರದಿ ಈಸಲಾದೀತೆ ಭುವಿಕಾಯ್ವ ಮೇಘನು ಮಳೆಸುರಿಸದಿರಲು ಧರಣಿಯೊಡಲಿನ ಬೀಜ ಮೊಳಕೆಯೊಡದೀತೆ ನಿನ್ನ ನಂಬಿ ಜನಿಸಿದ ಬಳ್ಳಿ ನಾನಾಗಿರಲು ನಿನ್ನಾಸರೆಯಿಲ್ಲದೇ ನಿಲ್ಲಲಾದೀತೆ ತಾಯಮಡಿಲಂತ ಭುವಿಯೆ ಬಾಯ್ತೆರೆದು ನುಂಗಿರಲು ತೃಣಮಾತ್ರ ನಾನು ಬದುಕಲಾದೀತೆ ಕಾಯಬೇಕಾದವರಿಂದು ಕಟುಕರಾಗಿರಲು ಕಪಟವರಿಯದ ಕೂಸ ಕತ್ತು ಉಳಿದೀತೆ ಬೇಲಿಯೇ ಎದ್ದು ಹೊಲಮೇಯುತಿರಲು ಹಿಡಿದ ಹಗ್ಗವೆ ಇಂದು ಹಾವಾಗಿ ಕಡಿದಿರಲು ಆಸೆಇಲ್ಲದ ಬದುಕ ನಡೆಸಲಾದೀತೆ ಆತ್ಮವಿಲ್ಲದ  ದೇಹ ಉಳಿಯಲಾದೀತೆ ಕೆ.ಬಾಲಾಜಿಚಿಂತಾಮಣಿ

My Certificates

Image

migrating farmers from villages

Image

tears of farmers

Image

voice of cows,uses of cows,tears of cows.

Image

ಕಾಮಧೇನು

Image
ಕಾಮಧೇನು ಹಗಲಿರುಳು ನಿನಗಾಗಿ ದುಡಿದೆ ಹಸಿವೆಂದಾಗ ಹಾಲನೀಡಿದೆ ಬಿಸಿಲೆಂದಾಗ ಮಜ್ಜಿಗೆಯ ನೀಡಿದೆ ನಾ ಬಡವಾಗುತಿರುವುದ ಲೆಕ್ಕಿಸದೆ ನೀ ಬಲಿಯಲೆಂದು ಬೆಣ್ಣೆ ನೀಡಿದೆ ನಿನಗಾಗಿ ರಕ್ತವನು ಬೆವರಾಗಿ ಹರಿಸಿದೆ ನಿನ್ನ ಬಾಳಲಿ ಹಸಿರ ಮೂಡಿಸಿದೆ ನಿನಗಾಗಿ ರಕ್ತವನು ಹಾಲಾಗಿ ಹರಿಸಿದೆ ನೀ ಹಡೆದ ಮಕ್ಕಳನು ನಾ ಸಲುಹಿದೆ ಮನೆಯಂಗಳವ ಸಗಣಿಯಿಂದ ನೀ ಸಾರಿಸಿದೆ ಹುಳುಹುಪ್ಪಟೆಗಳ ಒಳಬಿಡದೆ ನಾತಡೆದೆ ಅನಾರೋಗ್ಯದಿ ನೀ ನರಳಾಡಿದೆ ಪಂಚಗವ್ಯವ ನೀಡಿದ ವೈದ್ಯ ನಾನಾದೆ ನಿನಗಾಗಿ ಬಾಳಿದ ನನಗೆ ನೀ ಏನುಮಾಡಿದೆ ನನ್ನ ಕಂದನು ಗಂಡೆಂಬ ಕಾರಣಕೆ ದೂರ ಮಾಡಿದೆ ಮುದಿಯಾದೆನೆಂದು ಕಸಾಯಿಖಾನೆಗೆಸೆದೆ ಕೊನೆಗೂ ನಿನಗೆ ಭಾರವಾಗದೇ ಮಡಿದೆ.   ಕೆ.ಬಾಲಾಜಿ ಶಿಕ್ಷಕರು,ಕವಿಗಳು ಚಿಂತಾಮಣಿ. https://m.facebook.com/story.php?story_fbid=463127784068909&id=100011150745545

ಕಾಗೆ

Image
ಕಾಗೆ ಕಾಗೆಯ ಕಂಡೊಡನೆ ಕಲ್ಲೆಸಿಯುವಿರೇಕೆ? ಕಾಗೆಯೆಂಬ ಕೀಳರಿಮೆಯು ನಿಮಗೇಕೆ? ಮನೆಯೊಳಗೆ ಬಂದರೆ ಮನೆಬಿಡುವಿರೇಕೆ? ಕಾಗೆಯನ್ನು ಕುರೂಪಿ ಎನ್ನುವಿರೇಕೆ? ನೆಂಟರು ಬರುವ ಸುದ್ದಿಯನು ತಿಳಿಸುವುದು ಕಾಗೆಯಲ್ಲವೇ ಮನೆಯಂಗಳದ ಹುಳುಹುಪ್ಪಟೆಗಳ ಹಿಡಿದು ತಿನ್ನುವುದು ಕಾಗೆಯಲ್ಲವೇ ರೈತನಿಗೆ ಮಿತ್ರನಾದವ ಈ ಕಾಗೆಯಲ್ಲವೇ ಕೊನೆಗೆ ನಿನ್ನ ಪಿಂಡವ ತಿನ್ನುವುದು ಕಾಗೆಯಲ್ಲವೇ ಅನ್ನವ ಕಂಡೊಡನೆ ಬಳಗವೆಲ್ಲವನು ಕರೆದು ಹಂಚಿ ತಿನ್ನುವ ನೀತಿ ಕಾಗೆಯದು ಒಂದು ಕಾಗೆಗೆ ಕಷ್ಟಬಂದರೆ ಎಲ್ಲ ಕಾಗೆಗಳು ಒಂದೆಡೆ ಸೇರುವ ಜಾತಿ ಕಾಗೆಯದು.   ಕೆ,ಬಾಲಾಜಿ ಕವಿಗಳು,ಶಿಕ್ಷಕರು ಚಿಂತಾಮಣಿ.