ಹಿಡಿತವಿಲ್ಲದ ಪಟ

ಹಿಡಿತವಿಲ್ಲದ ಪಟ ಅಮ್ಮ ಅಕ್ಕಂದಿರ ಆಸರದಿ ಆಗಸವ ಕಂಡೆ ಸ್ವಚ್ಛಂದವಾಗಿ ವಿಹರಿಸುವ ಪುಟ್ಟ ಪಟದಂತೆ ದಿನಕೊಂದು ಬಣ್ಣದಿಂದೆಲ್ಲರ ಮನಸೋರೆಗೊಂಡೆ ಪ್ರೀತಿ ವಾತ್ಸಲ್ಯಗಳ ಕೊಂಡಿ ಈ ದಾರವೆಂದರಿತೆ ಪಟ ಅಂದ ಮೇಲೊಂದು ಬಾಲಬೇಕೆಂದೆ ಚೆಲುವೆಯೋರ್ವಳನು ತಂದು ಸಿಕ್ಕಿಸಿದರಂದೆ ಬಾಲದೊಂದಿಗೆ ಅಂದು ಬಾನಲ್ಲಿ ಮೆರೆದೆ ಬೀಳಲು ಬಿಡದಿರುವ ಬಂದವನು ಕಂಡೆ ಅಪ್ಪನಾ ಸಾವನ್ನು ಕಣ್ಣಾರಕಂಡೆ ಕ್ಷಣದಲ್ಲಿ ಕೆಳಗೆ ಕುಸಿದು ಬಿದ್ದೆ ದಾರವಿದ್ದರು ಕೆಳಗೆ ನಾ ಹೇಗೆ ಬಿದ್ದೆ ದಾರಕಿಂತಲು ಗಾಳಿ ಪ್ರಮುಖವೆಂದರಿತೆ ಗುರಿ ಮುಟ್ಟಬೇಕೆಂದು ಛಲದಿಂದ ಜಿಗಿದೆ ದಾರಹಿಡಿದಿರುವ ಕೈಗಳಲಿ ಸಡಿಲತೆಯ ಕಂಡೆ ಅಕ್ಕಂದಿರೊರಟರು ಬಾವಂದಿರಿಂದೆ ಹಿಡಿತವಿಲ್ಲದೆ ಪಟಕೆ ದೇವರೆದಿಕ್ಕೆಂದೆ. ಕೆ. ಬಾಲಾಜಿ ಚಿಂತಾಮಣಿ.