Posts

Showing posts from March, 2017

ಮಾಯವಾದ ಮಿಂಚು ಹುಳುಗಳು

Image
ನಮ್ಮ ಮನೆ ಹೊಲಗದ್ದೆಗಳ ಅಂಚಿನಲ್ಲಿ  ನಸುಗತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮುಸುತ್ತಾ ಹಾರುತ್ತಿದ್ದ ಮಿಂಚು ಹುಳುಗಳನ್ನು ಕಂಡು ಬಾಲ್ಯದಲ್ಲಿ ಅಚ್ಛರಿಗೊಂಡು ಮೂಗಿನ ಮೇಲೆ ಬೆರಳಿಟ್ಟು ,ಬಾಯ್ಬಿಟ್ಟು ನೋಡಿದ ಕ್ಷಣಗಳನ್ನು  ಮರೆಯಲಸದಳವಾಗಿದೆ. ಸಂಜೆಯ ನಸುಗತ್ತಲಲ್ಲಿ ಗಿಡಗಳ ಮೇಲೆ ಬೆರಳಾಡಿಸಿದರೆ ಸಾಕು ನೂರಾರು ಮಿಂಚು ಹುಳುಗಳ ದಂಡೆ ನಮ್ಮ ಮುಂದೆ ಪ್ರತ್ಯಕ್ಷವಾಗಿ ತಮ್ಮ ಸೊಭಗನ್ನು ತೋರಿಸುತ್ತಾ ವಯ್ಯಾರವಾಗಿ ಹಾರುತ್ತಾ ಹಳದಿ ಬಣ್ಣವನು ಚಿಮುಕಿಸುತ್ತಾ , ಸಣ್ಣ ಸಣ್ಣ ಸೊಳ್ಳೆ,ನೊಣ,ಕೀಟಗಳನ್ನು ಬೇಟೆಯಾಡುತ್ತಾ ನಮ್ಮೆಲ್ಲರ ಮನ ರೋಮಾಂಚನದಿಂದ ಸೆಳೆಯುತ್ತಿದ್ದ ಮದುರ ಕ್ಷಣಗಳು ಯಾರಿಗೆ ತಾನೆ ನೆನಪಿಲ್ಲ,ಮಿಂಚು ಹುಳುಗಳು ಅನಾದಿ ಕಾಲದಿಂದಲೂ ಮಾನವನ ಕುತೂಹಲವನ್ನು ಕೆಣಕುತ್ತಲೇ ಇವೆ. ಹಿಂದಿನ ಕಾಲದ  ಜನರು  ಮಿಂಚು ಹುಳುಗಳನ್ನು ತುಂಬಿಟ್ಟ ಲಾಂದ್ರಗಳನ್ನು ಬಳಸಿ ಕತ್ತಲಿನಿಂದ ಪಾರಾಗುತ್ತಿದ್ದರು, ಇಂದಿಗೂ ಸಹ ಗೀಜಗ ಹಕ್ಕಿಗಳು ತಮ್ಮ ಗೂಡುಗಳಲ್ಲಿ ಮಿಣುಕು ಹುಳುಗಳನ್ನು ಹಿಡಿದು ತಂದು ಜೇಡಿಮಣ್ಣಿನಿಂದ ಸಿಕ್ಕಿಸಿ ತನ್ನ ಮರಿಗಳಿಗೆ ಬೆಳಕು ನೀಡುತ್ತವೆ .ಅಷ್ಟೇ ಅಲ್ಲದೆ ಹಿಂದೆ ಬ್ರಿಜéಿಲ್ ದೇಶದ ಹೆಣ್ಣು ಮಕ್ಕಳು ತಮ್ಮ ಕೇಶಾಲಂಕಾರಕ್ಕಾಗಿ ಮಿಂಚು ಹುಳುಗಳನ್ನು ತಮ್ಮ ಮುಡಿಯಲ್ಲಿ ಸಿಕ್ಕಿಸಿಕೊಂಡು ತಮ್ಮ ಸೊಬಗನ್ನು ಹೆಚ್ಚಿಸಿಕೊಳ್ಳುತ್ತಿದ್ದರು ಎಂಬುದನ್ನು ಸಹ ಹಲವು ಮೂಲಗಳು ತಿಳಿಸುತ್ತವೆ,ಸೃಷ್ಟಿಯಲ್ಲಿರುವ ಪ್ರತಿಯ...