Posts

Showing posts from April, 2017

My Certificates

Image

migrating farmers from villages

Image

tears of farmers

Image

voice of cows,uses of cows,tears of cows.

Image

ಕಾಮಧೇನು

Image
ಕಾಮಧೇನು ಹಗಲಿರುಳು ನಿನಗಾಗಿ ದುಡಿದೆ ಹಸಿವೆಂದಾಗ ಹಾಲನೀಡಿದೆ ಬಿಸಿಲೆಂದಾಗ ಮಜ್ಜಿಗೆಯ ನೀಡಿದೆ ನಾ ಬಡವಾಗುತಿರುವುದ ಲೆಕ್ಕಿಸದೆ ನೀ ಬಲಿಯಲೆಂದು ಬೆಣ್ಣೆ ನೀಡಿದೆ ನಿನಗಾಗಿ ರಕ್ತವನು ಬೆವರಾಗಿ ಹರಿಸಿದೆ ನಿನ್ನ ಬಾಳಲಿ ಹಸಿರ ಮೂಡಿಸಿದೆ ನಿನಗಾಗಿ ರಕ್ತವನು ಹಾಲಾಗಿ ಹರಿಸಿದೆ ನೀ ಹಡೆದ ಮಕ್ಕಳನು ನಾ ಸಲುಹಿದೆ ಮನೆಯಂಗಳವ ಸಗಣಿಯಿಂದ ನೀ ಸಾರಿಸಿದೆ ಹುಳುಹುಪ್ಪಟೆಗಳ ಒಳಬಿಡದೆ ನಾತಡೆದೆ ಅನಾರೋಗ್ಯದಿ ನೀ ನರಳಾಡಿದೆ ಪಂಚಗವ್ಯವ ನೀಡಿದ ವೈದ್ಯ ನಾನಾದೆ ನಿನಗಾಗಿ ಬಾಳಿದ ನನಗೆ ನೀ ಏನುಮಾಡಿದೆ ನನ್ನ ಕಂದನು ಗಂಡೆಂಬ ಕಾರಣಕೆ ದೂರ ಮಾಡಿದೆ ಮುದಿಯಾದೆನೆಂದು ಕಸಾಯಿಖಾನೆಗೆಸೆದೆ ಕೊನೆಗೂ ನಿನಗೆ ಭಾರವಾಗದೇ ಮಡಿದೆ.   ಕೆ.ಬಾಲಾಜಿ ಶಿಕ್ಷಕರು,ಕವಿಗಳು ಚಿಂತಾಮಣಿ. https://m.facebook.com/story.php?story_fbid=463127784068909&id=100011150745545

ಕಾಗೆ

Image
ಕಾಗೆ ಕಾಗೆಯ ಕಂಡೊಡನೆ ಕಲ್ಲೆಸಿಯುವಿರೇಕೆ? ಕಾಗೆಯೆಂಬ ಕೀಳರಿಮೆಯು ನಿಮಗೇಕೆ? ಮನೆಯೊಳಗೆ ಬಂದರೆ ಮನೆಬಿಡುವಿರೇಕೆ? ಕಾಗೆಯನ್ನು ಕುರೂಪಿ ಎನ್ನುವಿರೇಕೆ? ನೆಂಟರು ಬರುವ ಸುದ್ದಿಯನು ತಿಳಿಸುವುದು ಕಾಗೆಯಲ್ಲವೇ ಮನೆಯಂಗಳದ ಹುಳುಹುಪ್ಪಟೆಗಳ ಹಿಡಿದು ತಿನ್ನುವುದು ಕಾಗೆಯಲ್ಲವೇ ರೈತನಿಗೆ ಮಿತ್ರನಾದವ ಈ ಕಾಗೆಯಲ್ಲವೇ ಕೊನೆಗೆ ನಿನ್ನ ಪಿಂಡವ ತಿನ್ನುವುದು ಕಾಗೆಯಲ್ಲವೇ ಅನ್ನವ ಕಂಡೊಡನೆ ಬಳಗವೆಲ್ಲವನು ಕರೆದು ಹಂಚಿ ತಿನ್ನುವ ನೀತಿ ಕಾಗೆಯದು ಒಂದು ಕಾಗೆಗೆ ಕಷ್ಟಬಂದರೆ ಎಲ್ಲ ಕಾಗೆಗಳು ಒಂದೆಡೆ ಸೇರುವ ಜಾತಿ ಕಾಗೆಯದು.   ಕೆ,ಬಾಲಾಜಿ ಕವಿಗಳು,ಶಿಕ್ಷಕರು ಚಿಂತಾಮಣಿ.  

ಚಿಂತನೆ

Image
ಚಿಂತನೆ ವಿಜ್ಙಾನವು ಬೆಳೆಯುತಿಹುದು ರಾಕೆಟ್ಟಿನಂತೆ ಮುನ್ನುಗ್ಗುತಿಹುದು ಅಂಗಾರಕನ ಅಂಗಳಕೆ ಹಾರುತಿಹರು ಅನ್ಯಗ್ರಹಗಳಲಿ ಪಾದಾರ್ಪಣೆಯ ಮಾಡುತಿಹರು ಮನುಜನ ಮನವರಿತ ವಿಕೃತ ಸ್ವಭಾವಗಳ ಕಂಡ ಕೀಳುಮಟ್ಟದ ಅಭಿರುಚಿಯ ಕಂಡ ಚಿಂತಕನ ಮನದಾಳದ ಚಿಂತನ ಇರುವುದೊಂದೇ ಭೂಮಿಯನ್ನು ಗೆದ್ದಲು ಹುಳುಗಳಂತೆ ತಿಂದು ಆಕಾಶ ಭೂಮಿಗಳ ಮಲಿನಗೊಳಿಸಿ ಪ್ರಾಣಿಸಂಕುಲವ ವಿನಾಶಗೊಳಿಸಿ ಭುವಿಯನ್ನೇ ಸೀಳುವ ನ್ಯೂಕ್ಲಿಯರ್ಗಳನ್ನು ಅಂಗೈಯಲ್ಲಿ ಹಿಡಿದಿರುವ ನೀನು ಅನ್ಯಗ್ರಹಗಳಲಿ ಮಾಡುವುದಾದರು ಏನು? ಅವುಗಳನ್ನೂ ಕುಲಗೆಡಿಸುವೆ ಏನು?     ಕೆ.ಬಾಲಾಜಿ ಶಿಕ್ಷಕರು,ಕವಿಗಳು  

ರೈತನ ಪ್ರಪಂಚ

Image
ರೈತನ ಪ್ರಪಂಚ ಗೋವಿನ ಮುಖ ಚಂದ | ಹಾಲಿನ ರುಚಿ ಚೆಂದ ಓಡೋಡಿ ಬರುವ ಕರು ಚಂದ | ಗೋವವ್ವ ನೀ ಇದ್ದರ ನನ್ನ ಮನಿ ಚೆಂದ. ನನ್ನಾಯ ಕುರಿ ಮುದ್ದು | ಬಿಳಿಯ ನಾಯಿಯು ಮುದ್ದು ನನ್ನಯ ಮನೆಗೆ ಗಿಡಮುದ್ದು | ಮಳೆರಾಯ ನೀ ಮುದ್ದು ನನ್ನ ತೋಟಾಕ. ಹಸಿ ಹುಲ್ಲು ಹಾಕೀನಿ | ತೌಡ್ನೀರ ಇಟ್ಟೀನಿ ಹೊರಗಾಡೆ ನೀವು ಬರಬ್ಯಾಡಿ | ಗೋವವ್ವ ಕೋಳೀಯ ಹಿಂಡು ಕೂಗಾಡ್ಯಾವು. ನೇಗೀಲ ಹೊತ್ತಿರುವೆ | ಬರಬರನೆ ಉಳುತಿರುವೆ ಎಲ್ಲಾರ ಕಣ್ಣು ನಿನಮ್ಯಾಗೆ | ಭೀಬಣ್ಣ ದೃಷ್ಠಿ ತಾಕೀತು ಜೋಪಾನ. ಹಸಿರಾದ ಬೆಳೆಬಂತು | ತುಂಬಿದ ತೆನೆ ಬಂತು ಸುಗ್ಗೀಯ ಕಾಲ ಬಂದಾಯ್ತು | ಬಸವಣ್ಣ ದಾನ್ಯದ ರಾಶಿಯು ನಗುತಿತ್ತು. ಸಂಕ್ರಾಂತಿ ದಿನದಂದು | ಸಿಂಗಾರ ಮಾಡೇನು ಕಬ್ಬು ಬೆಲ್ಲವನು ತಿನಿಸುವೆನು | ಬಸವಣ್ಣ ಊರೂರ ಮೆರವಣಿಗೆ ಮಾಡುವೆನು.                                                                ಕೆ.ಬಾಲಾಜಿ,ಶಿಕ್ಷಕರು,...

ರೈತಣ್ಣ ( janapada kavana)

Image
ರೈತಣ್ಣ       ಬರ್ತವ್ನೆ ಬರ್ತವ್ನೆ/ರೈತಾನು ಬರ್ತವ್ನೆ ಬಿಳಿಯ ಪಂಚೆಯನು ಕಟ್ಟವ್ನೆ /2/ ಕೈಯಲ್ಲಿ ಕುಡುಗೋಲು /ತಲೆಮ್ಯಾಗ ಹಸಿಹುಲ್ಲು ಏದುಸಿರು ಬಿಡುತಾ ಬರ್ತವ್ನೆ/2/ ಜೋಡೆತ್ತು ಹಿಡಿದವ್ನೆ /ಬಂಡೀಯ ಕಟ್ಟವ್ನೆ ಘಲ್ಲ ಘಲ್ಲೆಂದು ಬರ್ತವ್ನೆ/2/ ನೇಗೀಲ ಹಿಡಿದವ್ನೆ /ಚಾಟೀಯ ಬೀಸ್ತವ್ನೆ ಹೋಯ್ ಹೋಯ್ ಎಂದು ಉಳುತವ್ನೆ/2/ ಬಿರುಬಿಸಿಲ ಮದ್ಯಾಹ್ನ /ಬರಬರನೆ ಬೆವ್ತವ್ನೆ ಊರದಾರಿಯನು ನೋಡ್ತವ್ನೆ/2/ ಬರ್ತವ್ಳೆ ಬರ್ತವ್ಳೆ / ನಿಂಗೀಯು ಬರ್ತವ್ಳೆ ರಾಗೀಯ ಮುದ್ದೇಯ ತರ್ತವ್ಳೆ/2/ ಮುದ್ದೇಯ ಮುರಿಯುತ್ತ/ಚೆಲುವನ್ನು ನೋಡುತ್ತ ಗಬಗಬನೆ ತುತ್ತನ್ನು ನುಂಗ್ತವ್ನೆ/2/ ತಾಂಬೂಲ ಹಾಕ್ಕೊಂಡು ಪೇಟಾವ ಸುತ್ಕೊಂಡು ಸರಸರನೆ ಕೆಲಸಕ್ಕೆ ಹೋಗ್ತವ್ನೆ ಸೂರ್ಯಣ್ಣ ಮುಳುಗ್ತವ್ನೆ / ಚಂದ್ರಣ್ಣ ಏಳ್ತವ್ನೆ ಎತ್ತಿನ ಗಾಡಿಯ ಕಟ್ಡವ್ನೆ /2/ ರಪರಪನೆ ಬೀಸುತ್ತ/ದಡ ಬಡನೆ ಕೂಗುತ್ತ ಗುಡಿಸೀಲ ಕಡೆಗೆ ಹೊರಟವ್ನೆ.   ಕೆ.ಬಾಲಾಜಿ, ಶಿಕ್ಷಕರು/ಕವಿಗಳು.ಚಿಂತಾಮಣಿ

ಹೆಣ್ಣಿನ ಮಹತ್ವ

Image
ಹೆಣ್ಣು ಕುಟುಂಬದ ಕಣ್ಣು ಎಂಬ ನಾಣ್ಣುಡಿಯಂತೆ,ಬಹಳಷ್ಟು  ಜನ ಸಾಧಕರ ಅದ್ವಿತೀಯ ಸಾಧನೆಯ ಹಿಂದೆ ಒಂದಲ್ಲಾ ಒಂದು ವಿದವಾಗಿ ಅಂದರೆ ಮಾತೆಯಾಗಿ,ಅಧರ್ಾಂಗಿಣಿಯಾಗಿ,ಸಹೋದರಿಯಾಗಿ,ಗೆಳತಿಯಾಗಿ ಹೆಣ್ಣಿನ ಪ್ರೇರಣೆ ಪ್ರಮುಖವಾಗಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದಾಗಿದೆ, ಮಹಾತ್ಮ ಗಾಂದೀಜಿ,ಛತ್ರಪತಿ ಶಿವಾಜಿ,ಸ್ವಾಮಿ ವಿವೇಕಾನಂದರು ಮುಂತಾದವರು ಅವರ ತಾಯಂದಿರಿಂದ ಪ್ರೇರಿತರಾದವರು.ಈಶ್ವರ ಚಂದ್ರ ವಿದ್ಯಾಸಾಗರರೂ ಸಹ ಇದಕ್ಕೆ ಹೊರತಾಗಿಲ್ಲ,ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದ ಇವರು ಬಹಳಷ್ಟು ಕಷ್ಟಗಳಲ್ಲಿ ಬೆಳೆದು ಬಂದಂತವರಾಗಿದ್ದು ಇವರು ಚಿಕ್ಕಂದಿನಲ್ಲಿ ಬೀದಿ ದೀಪದ ಅಡಿಯಲ್ಲಿ ಕೂತು ಕಲಿತಂತವರು,ಬಡತನದ ಬೇಗೆಯಲ್ಲಿ ಬೆಂದಂತವರು ಇವರು ಚಿಕ್ಕಂದಿನಿಂದಲೂ ಬಹಳಷ್ಟು ಶ್ರಮಜೀವಿಗಳು,ಅವರ ಕಠಿಣ ಪರಿಶ್ರಮದಿಂದಾಗಿ ಮುಂದೆ ಒಳ್ಳೆಯ ಕೆಲಸದಲ್ಲಿ ಸೇರಿಕೊಳ್ಳುತ್ತಾರೆ,ಯಾವುದಕ್ಕು ಕೊರತೆ ಇಲ್ಲದಂತೆ ಜೀವಿಸುವಾಗ ಒಮ್ಮೆ ಅವರ ತಾಯಿಯವರಾದ ಭಾಗವತಿದೇವಿಯವರ ಬಳಿಬಂದು ಅಮ್ಮಾ ನಾನು ನನ್ನ ಸಂಪಾದನೆಯ ಸ್ವಲ್ಪಬಾಗವನ್ನು ನಿಮಗಾಗಿ ಮೀಸಲಿರಿಸಿದ್ದೇನೆ ನಿಮಗೇನು ಬೇಕು ಕೇಳಿ ಎಂದಾಗ ಅಯ್ಯೊ ನನಗೇನು ಬೇಡ ಮಗು ಎನ್ನುತ್ತಾರೆ ಇಲ್ಲಮ್ಮ ನಿಮಗಾಗಿ ನಾನು ಏನಾದರು ಕೊಡಲೇಬೇಕು ಎಂದು ಪಟ್ಟುಹಿಡಿದಾಗ  ಹಾಗಾದರೆ ಮಗು ನಮ್ಮ ಗ್ರಾಮದ ಜನತೆ ನೀರಿಗಾಗಿ ಬಹಳಷ್ಟು ಪರಿತಪಿಸುತ್ತಿದ್ದಾರೆ ನೀರಿಗಾಗಿ ತುಂಬಾ ದೂರ ಹೋಗಬೇಕಾಗಿದೆ ಅವರಿಗೆ ಒಂದು ಬಾವಿ ...

ಆಸೆ

Image
 ಮಮತೆಯ ಆಗರಳಾದ ಅಮ್ಮನ ಮಡಿಲಲಿ ಮಲಗುವ ಆಸೆ ಬಡರೈತನು ಧೀನವಾಗಿ ಆಗಸವ ಕಂಡಾಗ ಮಳೆಯ ಹನಿ ನಾನಾಗುವಾಸೆ ಅನ್ನದಾತನ ತೋಟದಲ್ಲಿ ತುಂಬಿದ ತೆನೆ ನಾನಾಗುವಾಸೆ ಚಿಗುರೊಡೆದ ಮೊಳಕೆಯ ಕಂಡಾಗ ಮಳೆ ಸುರಿಸುವ ಮೋಡ ನಾನಾಗುವಾಸೆ ಜನತೆಯ ಹಸಿವನೀಗಿಸಲು ನೇಗಿಲು ಹಿಡಿಯುವ ಯೋಗಿ ನಾನಾಗುವಾಸೆ ಹಚ್ಚ ಹಸಿರಾದ ಅರಣ್ಯದಲಿ ಕೂಗಾಡುವ ಕಾಜಾಣ ನಾನಾಗುವಾಸೆ ಹಣ್ಣ ನೀಡುತ ನೆರಳನೀಯುವ ಮರವು ನಾನಾಗುವಾಸೆ ಅಕ್ಕರೆಯಿಂದ ಹಾಲನೀಯುವ ಗೋವು ನಾನಾಗುವಾಸೆ ವಿಕಸಿದ ಪುಷ್ಪದ ಮಕರಂದ ನಾನಾಗುವಾಸೆ ಮಕರಂದದ ಸವಿ ಉಣ್ಣುವ ದುಂಬಿ ನಾನಾಗುವ ಆಸೆ. ಕೆ.ಬಾಲಾಜಿ.ಚಿಂತಾಮಣಿ ಶಿಕ್ಷಕರು/ಕವಿಗಳು. 9845689108

ಅದೊಂದು ದಿನ ಶನಿವಾರ

Image
 ನಾನು ಚಿಕ್ಕಂದಿನಿಂದಲೂ ಪಟ್ಟಣದ ಕಾಂಕ್ರೀಟ್ ಕಾಡಿನ ಇಕ್ಕಟ್ಟಿನಲ್ಲಿ ಬೆಳದುದರಿಂದಲೋ ಏನೋ ಹಳ್ಳಿಗಳ ಬಗ್ಗೆ ಅಪಾರವಾದ ಒಲವು,ಕಾಳಜಿ ಕಾರಣ ಶಾಲೆಯಲ್ಲಿ ನನ್ನ ಪಕ್ಕದಲ್ಲಿ ಕೂರುತ್ತಿದ್ದ ಹಳ್ಳಿ ಹುಡುಗರು ಹೇಳುತ್ತಿದ್ದ ಬೆಟ್ಟದಲ್ಲಿ ಕುರಿಕಾಯುವಾಗ ಆದ ಅವರ ಅನುಭವಗಳು,ಅದರಲ್ಲಿಯೂ ಪ್ರಮುಖವಾಗಿ ಚಿಕ್ಕೇಗೌಡ.ಅವನು ವಣರ್ಿಸುತ್ತಿದ್ದರೆ ಆ ಮನಮೋಹಕವಾದ ಮೈಪುಳುಕಿತಗೊಳಿಸುವ ಪ್ರಕೃತಿಯ ವಿಸ್ಮಯ ಸೌಂದರ್ಯರಾಶಿಯು ಕಣ್ ಮುಂದೆಯೆ ಹರಿದಾಡುತ್ತಿರುವಂತೆ ಬಾಸವಾಗುತ್ತಿತು,ಪ್ರತಿನಿತ್ಯ ಶಾಲೆಯಲ್ಲಿ ಮಾಸ್ತರರ ಪಾಠವನ್ನು ಪಕ್ಕಕ್ಕೆ ತಳ್ಳಿ ಊಹಾಲೋಕದ ಬೆಟ್ಟಗಳಲ್ಲಿ ಕುರಿಕಾಯುತ್ತಾ ಕಾಲ ಕಳೆಯುತ್ತಿದ್ದೆ ಅದೊಂದು ದಿನ ಶನಿವಾರ ಶಾಲೆ ಮುಗಿದ ನಂತರ ಹಳ್ಳಿ ಸ್ನೇಹಿತರ ಕೈಕಾಲು ಹಿಡಿದು ಕಾಡಿಬೇಡಿ ಒಪ್ಪಿಸಿ ಸೈಕಲ್ಲನ್ನೇರಿ ಅವರೊಟ್ಟಿಗೆ ಹಳ್ಳಿಯನ್ನು ನೋಡಲು ಸೈಕಲ್ಚೈನಿನ ಕರಕರ ಕರ್ಕಶ ಶಬ್ದದ ಸಮೇತ ಹಳ್ಳಿಗೆ ಹೊರಟೆ.ಹಳ್ಳಿ ಸಮೀಪಿಸುತ್ತಲೇ ಬಾನೆತ್ತರದ ಬೃಹದಾಕಾರದ ಆಲದ ಮರಗಳು ದಣಿದ ನಮಗೆ ಛತ್ರಿಯನ್ನು ಹಿಡಿದರೆ ಹಕ್ಕಿಗಳು ಸುಮದುರ ಇಂಚರದ ಮಂಗಳವಾದ್ಯಗಳೊಂದಿಗೆ ವೈಭವಯುತ ಸ್ವಾಗತವನ್ನು ಬಯಸಿದವು,ಎತ್ತ ನೋಡಿದರು ಹಸಿರೇ ಹಸಿರು ಆ ಹಸಿರಿನ ಆಸ್ವಾದನೆಯಿಂದಲೋ ಏನೋ ದಣಿದ ದೇಹದ ಹಸಿವು ಹಾರಿ ಹೋಯಿತು ಹೊಸಲೋಕಕ್ಕೆ ಪಾದಾರ್ಪಣೆ ಮಾಡಿದಂತಾಗಿ ಉಲ್ಲಾಸಗೊಂಡ ಮನವು ಹಕ್ಕಿಗಳನ್ನು ಹಿಂಬಾಲಿಸುತ್ತಾ ಆಗಸದಲ್ಲಿ ಹಾರತೊಡಗಿತು ನನ್ನ ಗೆಳೆಯರ ಕೇರಿಯಂತು ಇಂದ್ರನ...

my participation's in kannada stages

Image

ಆತ್ಮವು ಹೆಣ್ಣೂ ಅಲ್ಲ ಗಂಡೂ ಅಲ್ಲ

Image
ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು ಗಡ್ಡಮೀಸೆ ಬಂದೆಡೆ ಗಂಡೆಂಬರು ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ.ರಾಮನಾಥ  12ನೇ ಶತಮಾನದಲ್ಲೇ ಲಿಂಗಬೇದವನ್ನು ವಿರೋದಿಸಿದ ಕೀತರ್ಿ ದೇವರ/ಜೇಡರ ದಾಸಿಮ್ಮಯ್ಯನವರಿಗೆ ಸಲ್ಲುತ್ತದೆ,ಈ ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯವು ಭೃಹದಾಕಾರವಾಗಿ ಬೆಳೆದು ಬಂದು ಸಮಾಜದಲ್ಲಿರುವ ಓರೆ ಕೋರೆಗಳ,ಅಂಕುಡೊಂಕುಗಳ ವಿರುದ್ಧ ಸಿಡಿದೆದ್ದು ತಮ್ಮ ಹರಿತವಾದ ಹಾಗು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ವಚನ ಸಾಹಿತ್ಯವು ರೂಪುಗೊಂಡಿತು ಇದು ಕನ್ನಡ ಸಾಹಿತ್ಯದ ಬಹುಪ್ರಮುಖ ರೂಪಗಳಲ್ಲಿ  ಒಂದಾಗಿದೆ.ಹಾಡಿದರೆ ಹಾಡಾಗುವ,ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯಪ್ರಕಾರವಾಗಿದೆ ವಚನಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಗಿತ್ತು,ವಚನ ಎಂದರೆ ಪ್ರಮಾಣ ಎಂದರ್ಥ.ಮುಗ್ದ ಜನತೆಗೆ ಸಾಮಾಜಿಕ ಬದುಕಿನ ಮಹತ್ವವನ್ನು ಅಥರ್ೈಸಿ ವೈವಾಹಿಕ ಜೀವನ,ಶಿಸ್ತು,ಗುರುವಿನ ಮಹತ್ವ,ಧರ್ಮದ ಮಹತ್ವ,ಜಾತಿಪದ್ದತಿ,ಲಿಂಗಬೇದಬಾವಗಳ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ವಚನಗಳ ಮಹತ್ವ ಅಮೋಘವಾದುದು ಅಂತಃ ವಚನಕಾರರಲ್ಲಿ ಪ್ರಮುಖವಾಗಿ ಕನರ್ಾಟಕದ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಕಾಮಯ್ಯ,ಶಂಕರಿ ದಂಪತಿಗಳಿಗೆ ಜನಿಸಿದ ಜೇಡರದಾಸಿಮ್ಮಯ್ಯನವರು ಒಬ್ಬರು ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎಂಬ ನಾಮಾಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.ತ...