ಹೆಣ್ಣು ಕುಟುಂಬದ ಕಣ್ಣು ಎಂಬ ನಾಣ್ಣುಡಿಯಂತೆ,ಬಹಳಷ್ಟು ಜನ ಸಾಧಕರ ಅದ್ವಿತೀಯ ಸಾಧನೆಯ ಹಿಂದೆ ಒಂದಲ್ಲಾ ಒಂದು ವಿದವಾಗಿ ಅಂದರೆ ಮಾತೆಯಾಗಿ,ಅಧರ್ಾಂಗಿಣಿಯಾಗಿ,ಸಹೋದರಿಯಾಗಿ,ಗೆಳತಿಯಾಗಿ ಹೆಣ್ಣಿನ ಪ್ರೇರಣೆ ಪ್ರಮುಖವಾಗಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದಾಗಿದೆ, ಮಹಾತ್ಮ ಗಾಂದೀಜಿ,ಛತ್ರಪತಿ ಶಿವಾಜಿ,ಸ್ವಾಮಿ ವಿವೇಕಾನಂದರು ಮುಂತಾದವರು ಅವರ ತಾಯಂದಿರಿಂದ ಪ್ರೇರಿತರಾದವರು.ಈಶ್ವರ ಚಂದ್ರ ವಿದ್ಯಾಸಾಗರರೂ ಸಹ ಇದಕ್ಕೆ ಹೊರತಾಗಿಲ್ಲ,ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದ ಇವರು ಬಹಳಷ್ಟು ಕಷ್ಟಗಳಲ್ಲಿ ಬೆಳೆದು ಬಂದಂತವರಾಗಿದ್ದು ಇವರು ಚಿಕ್ಕಂದಿನಲ್ಲಿ ಬೀದಿ ದೀಪದ ಅಡಿಯಲ್ಲಿ ಕೂತು ಕಲಿತಂತವರು,ಬಡತನದ ಬೇಗೆಯಲ್ಲಿ ಬೆಂದಂತವರು ಇವರು ಚಿಕ್ಕಂದಿನಿಂದಲೂ ಬಹಳಷ್ಟು ಶ್ರಮಜೀವಿಗಳು,ಅವರ ಕಠಿಣ ಪರಿಶ್ರಮದಿಂದಾಗಿ ಮುಂದೆ ಒಳ್ಳೆಯ ಕೆಲಸದಲ್ಲಿ ಸೇರಿಕೊಳ್ಳುತ್ತಾರೆ,ಯಾವುದಕ್ಕು ಕೊರತೆ ಇಲ್ಲದಂತೆ ಜೀವಿಸುವಾಗ ಒಮ್ಮೆ ಅವರ ತಾಯಿಯವರಾದ ಭಾಗವತಿದೇವಿಯವರ ಬಳಿಬಂದು ಅಮ್ಮಾ ನಾನು ನನ್ನ ಸಂಪಾದನೆಯ ಸ್ವಲ್ಪಬಾಗವನ್ನು ನಿಮಗಾಗಿ ಮೀಸಲಿರಿಸಿದ್ದೇನೆ ನಿಮಗೇನು ಬೇಕು ಕೇಳಿ ಎಂದಾಗ ಅಯ್ಯೊ ನನಗೇನು ಬೇಡ ಮಗು ಎನ್ನುತ್ತಾರೆ ಇಲ್ಲಮ್ಮ ನಿಮಗಾಗಿ ನಾನು ಏನಾದರು ಕೊಡಲೇಬೇಕು ಎಂದು ಪಟ್ಟುಹಿಡಿದಾಗ ಹಾಗಾದರೆ ಮಗು ನಮ್ಮ ಗ್ರಾಮದ ಜನತೆ ನೀರಿಗಾಗಿ ಬಹಳಷ್ಟು ಪರಿತಪಿಸುತ್ತಿದ್ದಾರೆ ನೀರಿಗಾಗಿ ತುಂಬಾ ದೂರ ಹೋಗಬೇಕಾಗಿದೆ ಅವರಿಗೆ ಒಂದು ಬಾವಿ ...